ಶೆಫಾಲಿ ವರ್ಮಾ, ಓರ್ವ ಭಾರತೀಯ ಕ್ರಿಕೆಟ್ ಆಟಗಾರ್ತಿ. ಇವರು ಬಲಗೈ ಬ್ಯಾಟ್ಸ್ಉಮನ ಹಾಗೂ ಬಲಗೈ ಆಫ್ ಬ್ರೇಕ್ ಬೌಲರ್. ದೇಶಿ ಕ್ರಿಕೆಟ್‍ನಲ್ಲಿ ಟೀಮ್ ವೆಲ್ಲೋಸಿಟಿ, ಇಂಡಿಯಾ ಎ, ಮಹಿಳಾ ಬೋರ್ಡ್ ಅಧ್ಯಕ್ಷರ ೧೧ ತಂಡಗಳಿಗೆ ಆಡಿದ್ದಾರೆ. ಇವರು ಅಂತರರಾಷ್ಟ್ರೀಯ ಟಿ-೨೦ ಕ್ರಿಕೆಟ್ನಲ್ಲಿ ಭಾರತೀಯ ಮಹಿಳಾ ಕ್ರಿಕೆಟ್ ತಂಡದಿಂದ ಆಡಿದ ಸಾರ್ವಕಾಲಿಕ ಅತ್ಯಂತ ಕಿರಿಯ ಆಟಗಾರ್ತಿ ಎಂಬ ದಾಖಲೆ ಹೊಂದಿದ್ದಾರೆ. == ಆರಂಭಿಕ ಜೀವನ == ಶೆಫಾಲಿ ವರ್ಮಾ ರವರು ಜನವರಿ ೨೮, ೨೦೦೪ರಂದು ಹರಿಯಾಣದ ರೋಟಕನಲ್ಲಿ ಜನಿಸಿದರು. == ವೃತ್ತಿ ಜೀವನ == === ಪ್ರಥಮ ದರ್ಜೆ ಕ್ರಿಕೆಟ್ === ಆರಂಭಿಕ ಬ್ಯಾಟಿಂಗ್ ಕ್ರಮದಲ್ಲಿ ಆಡುವ ಶೆಫಾಲಿ, ದೇಶಿ ಕ್ರಿಕೆಟ್‍ನಲ್ಲಿ ಇಂಡಿಯಾ ಎ, ಟೀಮ್ ವೆಲ್ಲೋಸಿಟಿ, ಮಹಿಳಾ ಬೋರ್ಡ್ ಅಧ್ಯಕ್ಷರ ೧೧ ತಂಡಗಳಿಗೆ ಆಡಿದ್ದಾರೆ. === ಅಂತರರಾಷ್ಟ್ರೀಯ ಕ್ರಿಕೆಟ್ === ೨೦೧೯ರ ಸೆಪ್ಟೆಂಬರ್ನಲ್ಲಿ ಶೆಫಾಲಿ ಅವರಿಗೆ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಮೂರು ಟಿ-೨೦ ಪಂದ್ಯಗಳಿಗೆ ಆಯ್ಕೆ ಮಾಡಲಾಯಿತು. ನಂತರ ಸೆಪ್ಟೆಂಬರ್ ೨೪, ೨೦೧೯ರಂದು ಭಾರತದ ಸೂರತ್ನಲ್ಲಿ ದಕ್ಷಿಣ ಆಫ್ರಿಕಾ ಮಹಿಳಾ ಕ್ರಿಕೆಟ್ ತಂಡದ ವಿರುದ್ದ ನಡೆದ ಮೊದಲ ಟಿ-೨೦ ಪಂದ್ಯದ ಮೂಲಕ ಶೆಫಾಲಿ ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಪಾದಾರ್ಪಣೆ ಮಾಡಿದರು. ನವಂಬರ್ ೨೦೧೯ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಪಂದ್ಯದಲ್ಲಿ ಶೆಫಾಲಿ ೪೯ ಬಾಲ್ ಎದುರಿಸಿ ೭೪ ರನ್ ಗಳಿಸುವ ಮೂಲಕ ಅರ್ಧ ಶತಕ ಗಳಿಸಿದ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಅತ್ಯಂತ ಕಿರಿಯ ಆಟಗಾರ್ತಿ (೧೫ ವರ್ಷ) ಎಂಬ ದಾಖಲೆ ನಿರ್ಮಿಸಿದ್ದಾರೆ. ಈ ಐದು ಪಂದ್ಯದ ಸರಣಿಯಲ್ಲಿ ೧೫೮ ರನ್ ಗಳಿಸುವ ಮುಲಕ ಶೆಫಾಲಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು. ಜನವರಿ ೨೦೨೦ರಲ್ಲಿ ಐಸಿಸಿ ಮಹಿಳಾ ಟಿ-೨೦ ವಿಶ್ವಕಪ್ ೨೦೨೦ ಸರಣಿಗೆ ಭಾರತೀಯ ಮಹಿಳಾ ತಂಡದಲ್ಲಿ ಸ್ಥಾನ ಪಡೆದರು. ಜೊತೆಗೆ ಬಿಸಿಸಿಐನ ವಾರ್ಷಿಕ ಒಪ್ಪಂದ ಮಾಡಲಾಯಿತು. == ಸಾಧನೆ == === ಪಂದ್ಯಗಳು === ಟಿ-೨೦ ಕ್ರಿಕೆಟ್ : ೧೮ ಪಂದ್ಯಗಳು === ಅರ್ಧ ಶತಕ === ಟಿ-೨೦ ಕ್ರಿಕೆಟ್ನಲ್ಲಿ : ೦೨ == ಶ್ರೇಯಾಂಕ == === ಟಿ-೨೦ ಕ್ರಿಕೆಟ್ === ==== ಬ್ಯಾಟಿಂಗ್ ವಿಭಾಗ ==== ಐಸಿಸಿ ಮಹಿಳಾ ಟಿ-೨೦ ಕ್ರಿಕೆಟ್ನ್ ಬ್ಯಾಟಿಂಗ್ ವಿಭಾಗದಲ್ಲಿ ಪ್ರಥಮ ಶ್ರೇಯಾಂಕ ಪಡೆದಿದ್ದಾರೆ. == ಬಾಹ್ಯ ಸಂಪರ್ಕ == ಭಲೇ ಶಫಾಲಿ: ಅಣ್ಣನ ಹೆಸರಿನಲ್ಲಿ ಬ್ಯಾಟ್ ಬೀಸುತ್ತಿದ್ದ ಹುಡುಗಿಯ ಕಣ್ಣಲ್ಲಿ ಕನಸು!-ಉದಯವಾಣಿ ; 6 ಮಾರ್ಚ್ 2020 == ಉಲ್ಲೇಖಗಳು ==